ಶಿಮುಲ್ ಅಧ್ಯಕ್ಷರಾಗಿ ಹೆಚ್.ಎನ್. ಶ್ರೀಪಾದ್‌ರಾವ್ ಆಯ್ಕೆ 

ಶಿವಮೊಗ್ಗ : ಕೊನೆಗೂ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಹೆಚ್.ಎನ್.ಶೀಪಾದ್‌ರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ರೀಪಾದ್‌ರಾವ್ ಹಾಗೂ ತಿಪ್ಪೆಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಕೊನೆಗಳಿಗೆಯಲ್ಲಿ ತಿಪ್ಪೆಸ್ವಾಮಿ ನಾಮಪತ್ರ ಹಿಂಪಡೆದ ಕಾರಣ ಶ್ರೀಪಾದ್‌ರಾವ್ ಅವಿರೋಧವಾಗಿ ಶಿಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದ್ಹಾಗೆ, ಈ ಹಿಂದೆ ಆನಂದ್ ಶಿಮೂಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಹಿನ್ನೆಲೆಯಲ್ಲಿ ನವೆಂಬರ್ ೨೦ರಂದು ಚುನಾವಣೆ ನಡೆಯಬೇಕಿತ್ತು. ಆದ್ರೆ ಎಂಎಲ್‌ಸಿ ಚುನಾವಣೆಯ ಕಾರಣ ನೀಡಿ ಶಿಮುಲ್ ಚುನಾವಣೆಯನ್ನ ಮುಂದೂಡಲಾಗಿತ್ತು.