ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕೇಸ್‌ನಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಬಿ ರಿಪೋರ್ಟ್ ಸಿಕ್ಕಿದ್ದು ನಗರದಲ್ಲಿ ಬಿಜೆಪಿ ಕಾರ್ಯರ್ತರ ಸಂಭ್ರಮಾಚರಣೆ ಜೋರಾಗಿದೆ.
ಇದು ಸತ್ಯಕ್ಕೆ ಸಂದ ಜಯ ಎಂದು ಕಾರ್ಯಕರ್ತರು, ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಈಶ್ವರಪ್ಪ ಕೂಡ ಉಪಸ್ಥಿತರಿದ್ದರು. ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಬಂದಿದ್ದ ಆರೋಪದಿಂದ ಪಕ್ಷಕ್ಕೆ ಮುಜುಗರವಾಗಿತ್ತು. ತಪ್ಪು ಇನ್ನೊಮ್ಮೆ ಆಗೋದಿಲ್ಲ. ಕಷ್ಟಕಾಲದಲ್ಲಿ ಮಠಾಧೀಶರು ಹಾಗೂ ಅನೇಕರು ನನಗೆ ಶಕ್ತಿ ತುಂಬಿದ್ದರು ಎಂದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ಮಾಡಲಾಯಿತು.