ಇಷ್ಟು ದಿನ ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸಿ : ಪಾಲಿಕೆ ಸದಸ್ಯ ಬಿ.ರಾಜು

ಶಿವಮೊಗ್ಗ : ಆರ್‌ಎಂಎಲ್ ನಗರ ಪಾಲಿಕೆ ಸದಸ್ಯ ಬಿ.ರಾಜು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸ್ತಾಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಕೆಲವರು ಅವರ ಮನೆಗೆ ಮುತ್ತಿಗೆ ಯತ್ನವನ್ನು ಕೂಡ ಮಾಡಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿ.ರಾಜು. ನಾನೊಬ್ಬ ಪಾಲಿಕೆ ಸದಸ್ಯನಾಗಿ ನಿಮ್ಮ ಸಾಕಷ್ಟು ಸೇವೆಯನ್ನು ಮಾಡಿದ್ದೇನೆ. ಆದ್ರೆ ಕೆಲ ದಿನಗಳಿಂದ ನನ್ನ ಆರೋಗ್ಯ ಕೆಟ್ಟಿದ್ದರಿಂದ ನಿಮ್ಮ ಸೇವೆಯನ್ನು ಮಾಡಲಿಕ್ಕೆ ಆಗಿರಲಿಲ್ಲ. ನನ್ನ ಇನ್ನುಳಿದ ಅವಧಿಯಲ್ಲಿ ವಾರ್ಡ್‌ನ ಜನರಿಗಾಗಿ ನನ್ನ ಕೈ ಲಾದಷ್ಟು ಕೆಲಸ ಮಾಡ್ತೇನೆ. ಯಾವುದೇ ಕೆಲಸಗಳು ಬಾಕಿ ಉಳಿಯದಂತೆ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು. ಹಾಗೇನೆ ಇಷ್ಟು ದಿನ ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸಿ ಎಂದು ವಾರ್ಡ್‌ನ ಜನರನ್ನು ಬೇಡಿಕೊಂಡಿದ್ದಾರೆ.