ಸೊರಬ ಬಂದ್ ಬಹುತೇಕ ಯಶಸ್ವಿ

ಸೊರಬ : ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಸೊರಬದಲ್ಲಿ ನಡೆದ ಬಂದ್ ಬಹುತೇಕ ಯಶಸ್ವಿಯಾಗಿದೆ. ಸೊರಬದ ಶ್ರೀ ರಂಗನಾಥ ದೇವಾಲಯದ ಆವರಣದ ಎದುರು ಕೊಲೆ ಖಂಡಿಸಿ ಹಿಂದೂ ಪರ ಘೋಷಣೆಗಳನ್ನ ಕೂಗಲಾಗಿದೆ.

ಸೊರಬ ಬಜರಂಗದಳ, ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಹಾಗೂ ಎಲ್ಲಾ ಹಿಂದೂ ಪರ ಸಂಘಟನೆಗಳು ಬಿಜೆಪಿ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಿದ್ದವು. ಬಂದ್‌ಗೆ ಸೊರಬದಲ್ಲಿ ಬೆಂಬಲ ವ್ಯಕ್ತವಾಗಿದ್ದು ಬಹುತೇಕ ಯಶಸ್ವಿಯಾಗಿದೆ.