ಶೀಘ್ರದಲ್ಲೇ ತಾ.ಪಂ, ಜಿ.ಪಂ ಚುನಾವಣೆ - ಕೆಎಸ್‌ಈ 

ಶಿವಮೊಗ್ಗ : ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನ  ಶೀಘ್ರದಲ್ಲಿ ನಡೆಸಲು ನಮ್ಮ ಸರ್ಕಾರ ಉದ್ದೇಶಿಸಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕಳೆದ ಬಾರಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಾವು ಮನವಿ ಮಾಡಿದ್ದೆವು. ಆದ್ರೆ ಡಿ ಲಿಮಿಟೇಶನ್ ಹಾಗೂ ಮೀಸಲಾತಿ ಸರಿಯಿಲ್ಲ ಎಂದು ೭೮೦ ಅಬ್ಜೆಕ್ಷನ್‌ಗಳು ಬಂದ್ದಿದ್ದವು. ಇದಕ್ಕಾಗಿ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನ ಮಾಡಲಾಗಿದೆ ಎಂದು ಹೇಳಿದರು.