ಶಿವಮೊಗ್ಗ : ಪಠ್ಯಪುಸ್ತಕದಲ್ಲಿ ಸರಿಯಿಲ್ಲದ ವಿಚಾರವನ್ನು ಪ್ರಾಮಾಣಿಕವಾಗಿ ಹೇಳಿ, ತಿದ್ದಿಸಬೇಕು. ಅದನ್ನು ಬಿಟ್ಟು ಇಲ್ಲಿ ರಾಜಕೀಯ ಹಾಗೂ ಅವರ ಸಿದ್ದಾಂತವನ್ನು ತಂದು ಕೆಲ ಸಾಹಿತಿಗಳು ರಾಜ್ಯದಲ್ಲಿ ಗೊಂದಲವನ್ನು ನಿರ್ಮಾಣ ಮಾಡ್ತಾಯಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸದರು.
ಪಠ್ಯಪುಸ್ತಕ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಬಂದರೂ ಕೂಡ ನಮ್ಮ ಮಕ್ಕಳಿಗೆ ಸಾಕಷ್ಟು ಕಡೆ ಸತ್ಯ ಸಂಗತಿಗಳನ್ನು ತಿಳಿಸಿಲ್ಲ. ಅದಕ್ಕಾಗಿಯೇ ಪಠ್ಯಪರಿಷ್ಕರಣೆ ಮಾಡಲಾಗಿದೆ. ಪರಿಷ್ಕರಣೆಯಲ್ಲಿ ಏನಾದರು ದೋಷಗಳು ಇದ್ರೆ ಸಾಹಿತಿಗಳು ಪ್ರಾಮಾಣಿಕವಾಗಿ ಹೇಳಲಿ. ಆ ಕುರಿತು ಮರು ಪರಿಷ್ಕರಣೆ ಮಾಡೋಣ. ಅದನ್ನು ಬಿಟ್ಟು ನಾವು ವಿರೋಧ ಮಾಡೋಕಾಗಿಯೇ ಇದ್ದವೆ. ಅದಕ್ಕೆ ವಿರೋಧ ಮಾಡ್ತೇವೆ ಎಂದರೆ ಅದು ಹೇಗೆ ಮಾಡ್ತೀರಿ ನೋಡೋಣ ಎಂದು ಸವಾಲ್ ಹಾಕಿದರು.