ಹೈಲೆಟ್ಸ್ :
ಕುವೆಂಪು ರಂಗಮಂದಿರದಲ್ಲಿ ಸಾಮಾಜಿಕ ಅಧಿಕಾರಿತಾ ಶಿಬಿರ
ವಿಶೇಷ ಚೇತನರಿಗೆ ಉಚಿತ ಸಾಧನಗಳ ವಿತರಣೆ
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭಾಗಿ
ಶಿವಮೊಗ್ಗ : ಜಿಲ್ಲೆಯ ಸಾವಿರಕ್ಕು ಹೆಚ್ಚು ವಿಶೇಷ ಚೇತನರಿಗೆ ಉಚಿತವಾಗಿ ಸಾಧನಗಳನ್ನು ನೀಡುವ ಸಾಮಾಜಿಕ ಅಧಿಕಾರಿತಾ ಶಿಬಿರ ಕಾರ್ಯಕ್ರಮ ಕುವೆಂಪು ರಂಗಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ಎ. ನಾರಾಯಣಸ್ವಾಮಿ ಆಗಮಿಸಿದ್ದರು.
ದಿವ್ಯಾಂಗರಿಗೆ ವಿಲ್ ಚೇರ್, ಕ್ಯಾಲಿಪರ್ಸ್, ಶ್ರವಣೇಂದ್ರಿಯ, ಅಂದರಿಗೆ ಅಗತ್ಯವಾದಂತಹ ಬ್ಲೈಂಡ್ ಮೊಬೈಲ್‌ನಂಥಹ ಸಾಧನ ಸಲಕರಣೆಗಳನ್ನ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಸೇರಿದಂತೆ ಜಿಲ್ಲಾ ಪ್ರಮುಖ ನಾಯಕರು ಭಾಗಿಯಾಗಿದ್ದರು.