ಸ್ಮಾರ್ಟ್‌ಸಿಟಿ ಕಾಮಗಾರಿ ನಿರ್ಲಕ್ಷ್ಯ : ಕೋಟೆ ಠಾಣೆಯಲ್ಲಿ ದೂರು 

ಶಿವಮೊಗ್ಗ : ಸ್ಮಾರ್ಟ್‌ಸಿಟಿ ಕಾಮಗಾರಿಯಿಂದಾಗಿ ಆಗುತ್ತಿರುವ ಅವಾಂತರದ ವಿರುದ್ಧ ನಗರದ ಸತ್ರ ನ್ಯಾಯಾಲಯದ ಸಿಬ್ಬಂದಿ ಇಮಾಮ್‌ಸಾಬ್ ಎಂಬುವವರು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇವರು ಜನವರಿ 27 ರ ಮಧ್ಯಾಹ್ನ ಊಟ ಮಾಡಲು ಮನೆಗೆ ಹೋಗುವಾಗ ರಾಷ್ಟ್ರೀಯ ಕಾನೂನ ಕಾಲೇಜಿನ ಎದುರು ಗುಂಡಿಗೆ ಬಿದ್ದಿದ್ದರು. ಕಾಮಗಾರಿ ನಡೆಯುವ ಜಾಗದಲ್ಲಿ ಸೂಚನಾ ಫಲಕ ಅಥವಾ ಬ್ಯಾರಿಕೇಡ್‌ಗಳನ್ನ ಇಟ್ಟು ಅಪಘಾತವಾಗದಂಂತೆ ತಡೆಯಬೇಕು. ಆದ್ರೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಅವರು ದೂರು ದಾಖಲಿಸಿದ್ದಾರೆ.