ಶಿವಮೊಗ್ಗ : ಸಿದ್ದರಾಮಯ್ಯ ಒಬ್ಬ ಹುಚ್ಚ, ಅಯೋಗ್ಯ. ಈ ಹುಚ್ಚನಿಗೆ ನಿಮ್ಹಾನ್ಸ್‌ಗೆ ಸೇರಿಸಿದರು ಔಷಧಿ ಇಲ್ಲ. ಹುಚ್ಚುತನದಿಂದಾಗಿಯೇ ಚಾಮುಂಡೇಶ್ವರಿಯಲ್ಲಿ ಸೋತಿದ್ದು, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದು, ರಾಜ್ಯದಲ್ಲಿ ಸರಕಾರ ಕಳೆದುಕೊಂಡಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಮಾಧ್ಯಮಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಕೆ.ಎಸ್.ಈಶ್ವರಪ್ಪ ಆರ್‌ಎಸ್‌ಎಸ್ ಚೆಡ್ಡಿ ಸುಡುವ ಕೆಲಸಕ್ಕೆ ಬಂದರೆ ಹುಷಾರ್. ಚೆಡ್ಡಿಯೇ ನಿಮ್ಮ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿರೋದು. ಆರ್‌ಎಸ್‌ಎಸ್ ಚೆಡ್ಡಿ ಹಾಕೊಂಡು ಸಂಸ್ಕಾರ ಪಡೆದ ವ್ಯಕ್ತಿಗಳು ಈ ದೇಶ ಆಳುತ್ತಿದ್ದಾರೆ. ಆರ್‌ಎಸ್‌ಎಸ್ ಶಕ್ತಿಶಾಲಿಯಾಗಿ ಬೆಳೆದಿದೆ. ಇವತ್ತು ಆರ್‌ಎಸ್‌ಎಸ್‌ನನ್ನು ಸೋಲಿಸಲು ಆಗ್ತಾಯಿಲ್ಲ, ಹಾಗಾಗಿಯೇ ಆರ್‌ಎಸ್‌ಎಸ್ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿದರು.