ಸಿದ್ದರಾಮಯ್ಯ, ಡಿಕೆಶಿಗೆ ಮಾಡಲು ಕೆಲಸವಿಲ್ಲ: ಕೆ.ಸಿ.ನಾರಾಯಣಗೌಡ

ಶಿವಮೊಗ್ಗ : ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಗೆ ಮಾಡಲು ಕೆಲಸ ಇಲ್ಲ. ನಮಗೆ ಸಿಕ್ಕಾಪಟ್ಟೆ ಕೆಲಸವಿದೆ. ಸರ್ಕಾರ ನಮಗೆ ಜವಾಬ್ದಾರಿ ಕೊಟ್ಟಿದೆ. ನಾವು ಪುನಃ ಅಲ್ಲಿಗೆ ಹೋಗುವುದಾದರೆ ಅಲ್ಲಿಂದ ಬಿಟ್ಟು ಯಾಕೆ ಬರುತ್ತಿದ್ದೆವು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಬಿಜೆಪಿಗೆ ವಲಸೆ ಬಂದಿರುವ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂಬ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ನಾವು ಯಡಿಯೂರಪ್ಪ ಅವರನ್ನ ನಂಬಿಕೊಂಡು ಬಂದಿದ್ದೇವೆ. ವಲಸೆ ಬಂದ ೧೭ ಜನರಲ್ಲಿ ಯಾರೊಬ್ಬರು ಪಕ್ಷ ಬಿಟ್ಟು ಹೋಗುವುದಿಲ್ಲ. ನಮ್ಮ ದಾರಿ ತಪ್ಪಿಸಲು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.