ಗ್ರಾಮಾಂತರ ಪ್ರದೇಶದಲ್ಲಿ ಬಸ್‌ಗಳ ಕೊರತೆ-ವಿದ್ಯಾರ್ಥಿಗಳ ಗೋಳು ಕೇಳೋರು ಯಾರು?

ಹೈಲೆಟ್ಸ್: 

ಬಸ್ ನಿಲ್ಲೋಲ್ಲ.. ಹತ್ತೋಕೆ ಬಿಡೋಲ್ಲ 

ಗ್ರಾಮಾಂತರದಿಂದ ಬರುವ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು 

ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ 


ಶಿವಮೊಗ್ಗ:

ಬಸ್ ನಿಲ್ಲೋಲ್ಲ.. ಹತ್ತೋಕೆ ಬಿಡೋಲ್ಲ... ಬಸ್‌ಗಳ ಕೊರತೆ ಇದೆ.. ನಾವು ಓದೋದು ಹೇಗೆ ಎಂದು ವಿದ್ಯಾರ್ಥಿಗು ಪ್ರಶ್ನೆ ಮಾಡಿದ್ದಾರೆ. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ರಸ್ತೆ ತಡೆ ಚಳವಳಿ ಮಾಡಿದ್ದೇವೆ. ಇಷ್ಟಾದ್ರೂ ಸಹ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಬಸ್‌ಗಳ ಕೊರತೆ ಇದೆ. ಬಸ್ ಬಂದ್ರೂ ನಿಲ್ಲಿಸೋದಿಲ್ಲ.. ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡ್ತಾರೆ. ಹೀಗೆ ಆದ್ರೆ, ನಾವು ಸಿಟಿಗೆ ತೆರಳಿ ವಿದ್ಯಾಭ್ಯಾಸ ಮಾಡೋಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸರಕಾರ ಬಸ್‌ಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯ ಮಾಡಿದರು.