ಹರ್ಷ ಎಲ್ಲರ ಮಗನಾಗಿದ್ದಾನೆ 

ಶಿವಮೊಗ್ಗ : ದುಷ್ಕರ್ಮಿಗಳ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ಹರ್ಷ ಪೋಷಕರಿಗೆ ಸಾಂತ್ವನ ಹೇಳಿದ ಅವರು, ಹರ್ಷನ ಜೀವವಂತೂವಾಪಸ್ ಬರುವುದಿಲ್ಲ. ಆದರೆ ಇಡೀ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾನೆ. ಈ ಮೂಲಕ ಎಲ್ಲರಿಗೂ ಆತ ಮಗನಾಗಿದ್ದಾನೆ ಎಂದು ಸಮಾಧಾನ ಮಾಡಿದರು.

ಈ ವೇಳೆ ಮಾಧ್ಯಮದವರೊಂದಿಗೆ ರಾಜ್ಯ ಬಜೆಟ್ ಕುರಿತಾಗಿ ಮಾತನಾಡಿದ ಅವರು, ಇದು ಜನಪರ ಹಾಗೂ ಬಡವರ ಪರವಾದ ಬಜೆಟ್ ಆಗಿದೆ. ಎಲ್ಲಾ ವರ್ಗದ ಎಲ್ಲಾ ಸಮುದಾಯದ ಪರವಾದ ಬಜೆಟ್ ಮಂಡಿಸಲಾಗಿದೆ ಎಂದರು.