ಶಿವಮೊಗ್ಗ : ಮೈಸೂರು ನಂತರ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ದಸರಾ ನಡೆಯುತ್ತದೆ. 9 ದಿನಗಳ ಕಾಲ ನಡೆಯುವ ದಸರಾದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತೆ. ಇಷ್ಟೆಲ್ಲಾ ಮಾಡಲು ಕೋಟಿ ಕೋಟಿ ಖರ್ಚು ಕೂಡ ಆಗುತ್ತೆ. ಆದ್ರೀಗ ಶಿವಮೊಗ್ಗ ದಸರಾಕ್ಕೆ ರಾಜ್ಯ ಸರ್ಕಾರದಿಂದ ಭರ‍್ತಾಯಿದ್ದ 1 ಕೋಟಿ ಅನುದಾನ ಈ ಬಾರಿ ರ‍್ತಾಯಿಲ್ಲ ಎಂದು ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ಕಿಡಿಕಾರಿದ್ರು.
ಮುಂದುವರೆದು ಮಾತನಾಡಿದ ಅವರು, ದಸರಾಗೆ 1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತು ತಪ್ಪಿದ್ದಾರೆ. ಇದು ನಾಡದ್ರೋಹಿ ಸರ್ಕಾರ. ಪಾಲಿಕೆಯಿಂದಲೇ ದಸರಾದ ಸಂಪೂರ್ಣ ಖರ್ಚು ನೋಡಿಕೊಂಡ್ರೆ, ಜನರ ಮೂಲಭೂತ ಸೌಕರ್ಯಗಳಿಗೆ ಖರ್ಚು ಮಾಡಲು ಹಣ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.