ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಬೈಕ್ ರ್‍ಯಾಲಿ 

ಶಿವಮೊಗ್ಗ :  ಜಿಲ್ಲಾ ಬಿಜೆಪಿ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಭರ್ಜರಿಯಾಗಿ ಹರ್ ಘರ್ ತಿರಂಗ್ ಬೈಕ್ ರ್‍ಯಾಲಿ ನಡೆಯಿತು. ನಗರದ ಎಂಆರ್‌ಎಸ್ ವೃತ್ತದಿಂದ ಆರಂಭವಾದ ರ್‍ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಕಡೆಯದಾಗಿ ಶಿವಮೂರ್ತಿಯಾಗಿ ವೃತ್ತದಲ್ಲಿ ರ್‍ಯಾಲಿಯನ್ನು ಕೊನೆಗೊಳಿಸಲಾಯಿತು. ರ್‍ಯಾಲಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ರು.