ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದರಿಂದ ಅಧಿವೇಶನವನ್ನು ಮಾರ್ಚ್ 4ರವರೆಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮುಂದೂಡಿದರು.
ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು, ರಾಷ್ಟ್ರಧ್ವಜ ವಿಚಾರದಲ್ಲಿ ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಗರಂ ಆದ ಸ್ಪೀಕರ್, ಈಗಾಗಲೇ ೫ ದಿನ ಸದನದ ಸಮಯ ಹಾಳಾಗಿದೆ. ಪ್ರಶ್ನೋತ್ತರದಲ್ಲಿ ಭಾಗಿಯಾಗಿ, ಸದನದ ಸಮಯ ಹಾಳು ಮಾಡಬೇಡಿ ಎಂದರು. ಆನಂತರ ಕೆಲ ಸಮಯ ಸದನವನ್ನ ನಡೆಸಲಾಯಿತು. ಆದರೆ ಕಾಂಗ್ರೆಸ್‌ನವರು ತಮ್ಮ ಪ್ರತಿಭಟನೆಯನ್ನ ನಿಲ್ಲಿಸಲಿಲ್ಲ. ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರೂ ಕಾಂಗ್ರೆಸ್ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸದನವನ್ನು ಮಾರ್ಚ್ ೪ರವರೆಗೆ ಮುಂದೂಡಿದರು.
ನಿಲ್ಲದ ಕಾಂಗ್ರೆಸ್ ಪ್ರತಿಭಟನೆ : ಮಾರ್ಚ್ ೪ರವರೆಗೆ ಸದನ ಮುಂದೂಡಿಕೆ
ಬೆಂಗಳೂರು : ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದರಿಂದ ಅಧಿವೇಶನವನ್ನು ಮಾರ್ಚ್ ೪ರವರೆಗೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮುಂದೂಡಿದರು. ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು, ರಾಷ್ಟ್ರಧ್ವಜ ವಿಚಾರದಲ್ಲಿ ಈಶ್ವರಪ್ಪ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಗರಂ ಆದ ಸ್ಪೀಕರ್, ಈಗಾಗಲೇ ೫ ದಿನ ಸದನದ ಸಮಯ ಹಾಳಾಗಿದೆ. ಪ್ರಶ್ನೋತ್ತರದಲ್ಲಿ ಭಾಗಿಯಾಗಿ, ಸದನದ ಸಮಯ ಹಾಳು ಮಾಡಬೇಡಿ ಎಂದರು. ಆನಂತರ ಕೆಲ ಸಮಯ ಸದನವನ್ನ ನಡೆಸಲಾಯಿತು. ಆದರೆ ಕಾಂಗ್ರೆಸ್‌ನವರು ತಮ್ಮ ಪ್ರತಿಭಟನೆಯನ್ನ ನಿಲ್ಲಿಸಲಿಲ್ಲ. ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರೂ ಕಾಂಗ್ರೆಸ್ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸದನವನ್ನು ಮಾರ್ಚ್ ೪ರವರೆಗೆ ಮುಂದೂಡಿದರು.