ಶಿವಮೊಗ್ಗ : ಹಿರಿಯ ಕೇಬಲ್ ಆಪರೇಟರ್, ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಡಿಶ್ ಬುಟ್ಟಿ ಸ್ಥಾಪಿಸಿ ಮನೆಮನೆಗೆ ಕೇಬಲ್ ಸಂಪರ್ಕದ ಮೂಲಕ, ಟಿವಿ ವಾಹಿನಿ ಬಿತ್ತರಿಸಿದ್ದ ಹಾಗೂ ಭಾವಸಾರ ವಿಜನ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎಂ. ಮಹಬಲೇಶ್ ಮೃತಪಟ್ಟಿದ್ದಾರೆ. 76 ವರ್ಷದ ಮಹಾಬಲೇಶ್, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಬೆಂಗಳೂರು ಮತ್ತು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹಠಾತ್ ಹೃದಯಾಘಾತ ಉಂಟಾದ ಪರಿಣಾಮ ಸೋಮವಾರ ಸಂಜೆ 4.45ಕ್ಕೆ ದೈವಾಧೀನರಾಗಿದ್ದಾರೆ.
ಇವರ ಅಂತ್ಯಕ್ರಿಯೆ ಮಂಗಳವಾರ ನಗರದ ರೋಟರಿ ಚಿತಾಗಾರದಲ್ಲಿ ನೆರವೇರಿಸಲಾಗಿದೆ. ಮೃತರು, ಪತ್ನಿ, ಮೂವರು ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರು ಶಿವಮೊಗ್ಗದ ನಗು ಕೂಟ ಸೇರಿದಂತೆ, ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರೂ ಕೂಡ ಆಗಿದ್ದರು. ಅಂದ್ಹಾಗೆ ಮಹಾಬಲೇಶ್ ಅವರುನಮ್ಮ ವಾಹಿನಿಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ನಮಗೆ ಶುಭಕೋರಿದ್ದರು. ಈ ವೇಳೆ ಜಿಲ್ಲಾ ಉಸ್ತುವರಿ ಸಚಿವ ಕೆ.ಎಸ್.ಈಶ್ವರಪ್ಪನವರಿಂದ ಇವರನ್ನ ಸನ್ಮಾನಿಸಲಾಗಿತ್ತು. ನಮ್ಮ ವಾಹಿನಿಯ ಪರವಾಗಿ ಮಹಾಬಲೇಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನ ಅರ್ಪಿಸುತ್ತಿದ್ದೇವೆ.