ಶಿವಮೊಗ್ಗ : ನಗರದ ಊರುಗಡೂರು ಗ್ರಾಮದಲ್ಲಿ ಸೂಡಾದಿಂದ ನಿರ್ಮಿಸುತ್ತಿರುವ ಖಾಲೀ ಲೇ ಔಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬುದ್ಧಾನಗರದ ೨೩ ವರ್ಷದ ತಿಲಕ್, ಆಯನೂರಿನ ಹೊಸೂರು ಗ್ರಾಮದ ೨೧ ವರ್ಷದ ಮಹಮ್ಮದ್ ಗೌಸ್, ಚೋರಡಿಯ ೨೦ ವರ್ಷದ ಮಂಜುನಾಥ್ ಹಾಗೂ ಭದ್ರಾವತಿ ಸಾದತ್ ಕಾಲೋನಿಯ ೨೩ ವರ್ಷದ ಸುಮನ್ ಎಂಬುವವರು ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು ೩೦ ಸಾವಿರ ಮೌಲ್ಯದ ೧ ಕೆ.ಜಿ ೨೫೦ ಗ್ರಾಂ ತೂಕದ ಒಣ ಗಾಂಜಾ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.