ಶಿವಮೊಗ್ಗ : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತಾಗಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಡೆಯುತ್ತಿರುವದು ನನ್ನ ಗಮನಕ್ಕೆ ಬಂದಿದೆ. ಈ ಕುರಿತಾಗಿ ಸೂಕ್ತ ತನಿಖೆ ನಡೆಸಲಾಗುವುದು. ಅಲ್ಲಿನ ಭದ್ರತೆಯನ್ನ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವರಿ ಬದಲಾವಣೆ ಕುರಿತಾಗಿ ಮಾತನಾಡಿದ ಅವರು, ಈ ಕುರಿತಾಗಿ ನನಗೆ ಯಾವುದೇ ಅಸಮಾದಾನವಿಲ್ಲ. ನಾವು ಕೆಲಸ ಮಾಡುವವರು ನಮಗೆ ಚಿಕ್ಕಮಗಳೂರು ಕೊಟ್ರೇನು? ತುಮಕೂರು ಕೊಟ್ರೇನು?. ಒಂದು ಜಿಲ್ಲೆಯನ್ನ ನೋಡಿದ್ದೆ ಇವಾಗ ಇನ್ನೊಂದು ಜಿಲ್ಲೆಯನ್ನ ಒಳಹೋಗಿ ನೋಡುವುದು ನನಗೆ ಸಂತೋಷವಿದೆ ಎಂದರು.