ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ಸ್ಮಶಾನ ಜಾಗ ವಿವಾದ

ಹೈಲೆಟ್ಸ್ : 

ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ಸ್ಮಶಾನ ಜಾಗ ವಿವಾದ
೨೫ ವರ್ಷದಿಂದ ವಾಸವಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆರೋಪ
ಕುಟುಂಬಗಳಿಗೆ ಅಲ್ಲಿಯೇ ವಾಸಿಸಲು ಅವಕಾಶ ನೀಡಬೇಕು
ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಸಂತೆಕಡೂರಿನಲ್ಲಿ ಸ್ಮಶಾನದ ಜಾಗವೆಂದು ಹೇಳಿ ೨೫ ವರ್ಷದಿಂದ ವಾಸವಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪ್ರತಿಭಟನೆ ನಡೆಸಿತು.

ಗ್ರಾಮದ ಸರ್ವೇ ನಂಬರ್ ೯೫ರಲ್ಲಿ ೧.೨೫ ಎಕರೆ ಜಮೀನನ್ನು ಸ್ಮಶಾನದ ಜಾಗವೆಂದು ಪರಿಗಣಿಸಿ ತಂತಿ ಬೇಲೆ ಹಾಕಲಾಗಿತ್ತು. ಆದರೆ ಈಗ ೧.೨೫ ಎಕರೆ ಇದ್ದ ಸ್ಮಶಾನದ ಜಾಗವನ್ನು ೩ ಎಕರೆ ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಜಾಗದಲ್ಲಿ ೨೫ ಕುಟುಂಬಗಳು ಸುಮಾರು ೨೫-೨೬ ವರ್ಷದಿಂದ ವಾಸವಿದ್ದು ಕಂದಾಯವನ್ನು ಕೂಡ ಕಟ್ಟಿದ್ದಾರೆ.

ಆದರೀಗ ಆ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಾವಾದಲ್ಲಿ ಮನೆಗಳನ್ನು ಕೆಡಗುವುದಾಗಿ ಹೇಳಿ ತಹಶೀಲ್ದಾರ್, ರಾಜಸ್ವ ನಿರೀಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೌರ್ಜನ್ಯ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆರೋಪಿಸಿದ್ರು. ಹಾಗೇನೆ ಆ ಕುಟುಂಬಗಳಿಗೆ ಅಲ್ಲಿಯೇ ವಾಸ ಮಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪರ್ಯಾಯ ಜಾಗದ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.