ಶಿವಮೊಗ್ಗ : ಮಾರ್ಚ್ ೬ರಂದು ಪಂಡಿತ್ ಭೀಮಸೇನ ಜೋಶಿ ಜನ್ಮ ಶತಮಾನೋತ್ಸವದ ಅಂಗವಾಗಿ ಸಂತವಾಣಿ ಮತ್ತು ದಾಸವಾಣಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ಆರು ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪಂಡಿತ್ ಕೃಷ್ಣೇಂದ್ರ ವಾಡೀಕರ್ ಅಭಂಗವಾಣಿ ಮತ್ತು ದಾಸವಾಣಿ ಗಾಯನ ಮಾಡಲಿದ್ದಾರೆ ಹಾಗೂ ಪಂಡಿತ್ ಶ್ರೀಪತಿ ಪಾಡಿಗಾರ್ ಅವರ ಶಿಷ್ಯರ ಸಂಗೀತ ವಾದ್ಯವಿರಲಿದೆ. ಸಂಗೀತ ಪ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕೆಂದು ಕಾರ್ಯಕ್ರಮ ಆಯೋಜಕರಾದ ಸಪ್ತಸ್ವರ ಸಂಗೀತ ಸಭಾ ವತಿಯಿಂದ ಮಾಧ್ಯಮಗೋಷ್ಠಿ ನಡೆಸಿ ಮನವಿ ಮಾಡಿಕೊಳ್ಳಲಾಗಿದೆ.