ಶಿವಮೊಗ್ಗದಲ್ಲಿ ಸಂಕ್ರಾಂತಿ ಸಂಭ್ರಮ

ಶಿವಮೊಗ್ಗ : ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ. ಈ ಬಾರಿ ಸಂಕ್ರಾಂತಿ ಹಬ್ಬವನ್ನು ಕೆಲವರು ಜನವರಿ 14ರಂದು ಆಚರಿಸುತ್ತಿದ್ದಾರೆ. ಇನ್ನೂ ಕೆಲವರು ಜನವರಿ 15ರಂದು ಆಚರಣೆ ಮಾಡಲಿದ್ದಾರೆ. ಆದರೆ ಜನವರಿ ೧೫ರಂದು ವೀಕೆಂಡ್ ಕರ್ಪ್ಯೂ ಆಗಿರುವುದರಿಂದ ನಾಳೆ ಹಬ್ಬ ಆಚರಿಸುವವರೂ ಕೂಡ ಇವತ್ತೇ ಹಬ್ಬಕ್ಕೆ ಬೇಕಾಗೋ ಸಾಮಗ್ರಿಗಳನ್ನು ಖರೀದಿ ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಂಧಿ ಬಜಾರ್, ಶಿವಪ್ಪನಾಯಕ ಪ್ರತಿಮೆ ಮುಂಭಾಗ ಹಬ್ಬದ ಖರೀದಿ ಭರಾಟೆ ಜೋರಾಗಿಯೇ ನಡೆಯಿತು. ಜನರು ಕಬ್ಬು ಹೂವು, ಹಣ್ಣು, ಎಳ್ಳು, ಬೆಲ್ಲ, ತರಕಾರಿ ಖರೀದಿಯಲ್ಲಿ ಬ್ಯಸಿಯಾಗಿದ್ದರು. ಆದರೆ ಸಾಮಾನ್ಯ ವರ್ಷಗಳಂತೆ ಈ ಬಾರಿ ವ್ಯಾಪಾರ ಅಷ್ಟೇನೂ ಜೋರಾಗಿಲ್ಲ. ಕೊರೊನಾದಿಂದ ತುಂಬಾ ಡಲ್ ಆಗಿದೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.