ವಾಸವಿ ಪಬ್ಲಿಕ್ ಶಾಲೆಯಲ್ಲಿ ಸಂಕ್ರಾಂತಿ ಉತ್ಸವ ಆಚರಣೆ

ಶಿವಮೊಗ್ಗ : ಕೋಟೆ ರಸ್ತೆಯಲ್ಲಿನ ವಾಸವಿ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ಮನೋರಂಜನಾ ಕ್ರೀಡೆಗಳನ್ನ ಆಯೋಜಸಲಾಗಿತ್ತು.

ಈ ಕುರಿತಾಗಿ ಮಾತನಾಡಿದ ವಾಸವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಪ್ರತಿ ವರ್ಷ ಸಂಕ್ರಾಂತಿ ಜಾತ್ರೆಯನ್ನ ಮಾಡ್ತಾಯಿದ್ವಿ. ಆದ್ರೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಸಂಕ್ರಾಂತಿ ಜಾತ್ರೆಯ ಬದಲಾಗಿ ಸಂಕ್ರಾಂತಿ ಉತ್ಸವವನ್ನ ಆಚರಣೆ ಮಾಡ್ತಾಯಿದೀವಿ. ಭಾರತೀಯ ಸಂಸ್ಕೃತಿಯ ಪಾರಂಪರಿಕವಾಗಿರುವ ಚಟುವಟಿಕೆಗಳನ್ನ ಹೊರ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.