ಮೀಸಲು ಹುದ್ದೆಯನ್ನ ೪೦ರಿಂದ ೫೦ ಲಕ್ಷಕ್ಕೆ ಬೇರೆಯವರಿಗೆ ಮಾರಲಾಗಿದೆ : ಕೆ.ಪಿ. ಶ್ರೀಪಾಲ್ ಆರೋಪ

ಶಿವಮೊಗ್ಗ : ಸಿಮ್ಸ್‌ನಲ್ಲಿ ಕರೆಯಲಾಗಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಮೀಸಲಾಗಿದ್ದ ಲೈಂಗಿಕ ಅಲ್ಪಸಂಖ್ಯಾತ ಹುದ್ದೆಯನ್ನ ಹಣಕ್ಕೆ ಮಾರಿಕೊಂಡಿರುವುದಾಗಿ ವಕೀಲ ಕೆ.ಪಿ.ಶ್ರೀಪಾಲ್ ಗಂಭೀರ ಆರೋಪ ಮಾಡಿದ್ದಾರೆ. 

ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಮ್ಸ್ ಮೆಡಿಕಲ್ ಕಾಲೇಜ್‌ನಲ್ಲಿ 17 ಜನ ಸಹಾಯಕ ಪ್ರಾಧ್ಯಪಕರ ಹುದ್ದೆ ಕರೆಯಲಾಗಿತ್ತು. ಈ 17 ಹುದ್ದೆಗಳಲ್ಲಿ ಒಂದು ಜನರಲ್ ಪೋಸ್ಟ್‌ಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಸುಪ್ರೀಂಕೋರ್ಟ್‌ನ ನಿರ್ದೇಶನ ಹಾಗೂ ಸರ್ಕಾರದ ಸುತ್ತೋಲೆಯಲ್ಲಿ ಕೂಡ ಇದೆ. ಹುದ್ದೆಯ ಕುರಿತಾಗಿ ಪತ್ರಿಕಾ ಪ್ರಕಟಣೆಯನ್ನ ಕೇವಲ ಲೋಕಲ್ ಪೇಪರ್‌ಗಳಲ್ಲಿ ಮಾತ್ರ ಪ್ರಕಟಿಸಿದ್ದಾರೆ. ನಂತರ ಯಾವ ಲೈಂಗಿಕ ಅಲ್ಪಸಂಖ್ಯಾತರು  ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಈ ಹುದ್ದೆಯನ್ನ ಬೇರೆಯವರಿಗೆ ನೀಡಲಾಗಿದೆ. ಈ ಮೀಸಲು ಹುದ್ದೆಯನ್ನ 40ರಿಂದ 50 ಲಕ್ಷಕ್ಕೆ ಮಾರಲಾಗಿದೆ ಎಂದು ಆರೋಪಿಸಿದರು.