ಶಿವಮೊಗ್ಗ : ಹಿಜಾಬ್ ಸಂಘರ್ಷದ ಹಿಂದೆ ಕೆಲವು ಕೋಮುವಾದಿ ಸಂಘಟನೆಗಳ ಕೈವಾಡವಿದೆ. ಇಂತಹ ಸಂಘಟನೆಗಳ ಮೇಲೆ ಎನ್‌ಐಎ ತನಿಖೆ ನಡೆಸಬೇಕೆಂದು ಬಜರಂಗದಳದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಕುರಿತು ಮಾತನಾಡಿದ ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಸಮವಸ್ತ್ರ ಧರಿಸಕೊಂಡು ಬರಬೇಕೆಂದು ಕೊರ್ಟ್ ಮಧ್ಯಂತರ ಆದೇಶ ನೀಡಿದ್ದರು ಸಹ ಕೆಲವರು ನಾವು ಧರ್ಮದ ಆಚರಣೆಯನ್ನೇ ಮಾಡುತ್ತೇವೆ ಎಂದು ಪಟ್ಟು ಹಿಡಿಯುತ್ತಿರುವ ಘಟನೆಗಳ ನಡೆಯುತ್ತಿವೆ. ಇವುಗಳ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆ. ಹಾಗೂ ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿರುವ ಸಂಘಟನೆಗಳ ಕುರಿತು ಎನ್‌ಐಎಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.