ಶಿವಮೊಗ್ಗ : ಜನಪರ ಚಳುವಳಿ, ಸಂಘಟನೆ ಮತ್ತು ವ್ಯಕ್ತಿಗಳ ವೇದಿಕೆ ಶಿವಮೊಗ್ಗ ವತಿಯಿಂದ ಧರ್ಮ ಸಮನ್ವಯ ಮತ್ತು ಕುವೆಂಪು ವಿಚಾರಧಾರೆ ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಯುವಜನರೊಡನೆ ಸಂವಾದ ಮತ್ತು ಚಿಂತನ ಮಂಥನ ಗೋಷ್ಠಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೀನಾಕ್ಷಮ್ಮ ಮತ್ತು ಜಬೀವುಲ್ಲಾ ನೆರವೇರಸಿಕೊಟ್ಟರು. ಎಲ್ಲಾ ಗಣ್ಯರು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಪ್ರೋ.ಪ್ರಕಾಶ್ ಕಮ್ಮರಡಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ, ವಕೀಲ ಶ್ರೀಪಾದ್, ಕರ್ನಾಟಕ ರಾಜ್ಯ ರೈತ ಸಂಘದ ಕೆ.ಟಿ.ಗಂಗಾಧರ್, ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್.ಜನಾರ್ಧನ, ಪ್ರೋ.ರಾಚಪ್ಪ, ಬಾನು ಮುಷ್ತಾಕ್, ಪ್ರೊ.ಸಿರಾಜ್ ಅಹಮದ್, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು