ಶಿವಮೊಗ್ಗ: ಮಾದಕ ವಸ್ತುಗಳ ಕುರಿತು ಜನಜಾಗೃತಿ ಮೂಡಿಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ನಗರದ ದುರ್ಗಿಗುಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಾಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಾದಕ ವಸ್ತುವನ್ನು ಒಂದು ಬಾರಿ ಅಂತ ಟೇಸ್ಟ್ ನೋಡಲಿಕ್ಕೆ ತಗೊಂಡರೂ ಅದೇ ಮುಂದೆ ಚಟವಾಗಿ ಪರಿಣಮಿಸುತ್ತದೆ. ನಿಮ್ಮ ತಂದೆ ತಾಯಿ ಕಷ್ಟ ಪಟ್ಟು ನಿಮ್ಮನ್ನು ಓದಲಿಕ್ಕೆ ಅಂತ ಶಾಲೆಗೆ ಕಳಿಸ್ತಾರೆ. ನೀವು ವಿದ್ಯಾವಂತರಾಗಿ ಉತ್ತಮ ಪ್ರಜೆಗಳಾಗಲೆಂದು ಅವರು ಬಯಸುತ್ತಾರೆ. ಮಾದಕ ವಸ್ತುಗಳ ಸೇವನೆ ನಿಮ್ಮನ್ನು ಸಮಾಜದಲ್ಲಿ ಹಲವು ಕೆಟ್ಟ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹಾಗಾಗಿ ಅವುಗಳಿಗೆ ಬಲಿಯಾಗದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಎಂದು ಸಲಹೆ ನೀಡಿದ್ರು. ಮಾದಕ ವಸ್ತುಗಳ ಸೇವನೆ ನಿಮ್ಮ ಶಾಲಾ ಆವರಣದಲ್ಲಿ ಕಂಡುಬAದ್ರೆ ಕೂಡಲೇ ಪ್ರಾಂಶುಪಾಲರ ಗಮನಕ್ಕೆ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫಾ ಹುಸೇನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿö್ಮÃಪ್ರಸಾದ್ ಭಾಗವಹಿಸಿದ್ದರು.