ಶಿವಮೊಗ್ಗ : 350 ವರ್ಷಗಳ ಹಿಂದೆ ಫೆಬ್ರವರಿ 27ರಂದು ಕೆಳದಿ ರಾಣಿ ಚೆನ್ನಮ್ಮನಿಗೆ ಪಟ್ಟಾಭಿಷೇಕವಾಗಿತ್ತು. ಆದ್ದರಿಂದ ಅದೇ ದಿನದಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವ ನಡೆಯಲಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಉತ್ಸವದ ರೂಪರೇಷಗಳನ್ನು ರೂಪಿಸಲು ಸಭೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಬಾರಿ ಕೆಳದಿ ರಾಣಿ ಚೆನ್ನಮ್ಮ ಉತ್ಸವವನ್ನು ಒಂದು ದಿನ ಸರಳವಾಗಿ ಆಚರಣೆ ಮಾಡಲಾಗುವುದು. ಉತ್ಸವವನ್ನು ಪ್ರತಿ ವರ್ಷವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ೨೫ ಲಕ್ಷ ರೂ ಅನುದಾನ ಮಂಜೂರಾತಿಯಾಗಿದೆ ಎಂದು ಮಾಹಿತಿ ನೀಡಿದರು.