ರಂಜಾನ್ ಮಾಸ ಆರಂಭ 

ಶಿವಮೊಗ್ಗ : ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಆರಂಭವಾಗಿದೆ. ಶಿವಮೊಗ್ಗದಲ್ಲಿಯೂ ರಂಜಾನ್ ಮಾಸದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಒಂದು ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಇಸ್ಲಾಮಿಕ್ ತಿಂಗಳ ಪ್ರಕಾರ, ರಂಜಾನ್ ಒಂಬತ್ತನೇ ತಿಂಗಳಲ್ಲಿ ಬರುತ್ತದೆ. ಈ ಬಾರಿ ರಂಜಾನ್ ಏಪ್ರಿಲ್ 3ರಿಂದ ಆರಂಭವಾಗಿದೆ. ರಂಜಾನ್ ಮಾಸದಲ್ಲಿ ಉಪವಾಸದಲ್ಲಿ ಇರಲಾಗುತ್ತದೆ. ತದನಂತರ ಈದ್-ಉಲ್-ಫಿತರ್ ಆಚರಣೆಯೊಂದಿಗೆ ರಂಜಾನ್ ಕೊನೆಗೊಳ್ಳುತ್ತದೆ.