ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಪೈತಾನ್ ಬೂಟ್ ಕ್ಯಾಂಪ್‌ಗೆ ಚಾಲನೆ

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಪೈತಾನ್ ಬೂಟ್ ಕ್ಯಾಂಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿ ಕಲ್ಯಾಣದ ನಿರ್ದೇಶಕ ಡಾ. ಎನ್.ಶಿವಶಂಕರ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪೈಥಾನ್ ಪ್ರೋಗ್ರಾಂ ಕಲಿಯುವುದು ತುಂಬಾ ಅವಶ್ಯಕವಾಗಿದೆ. ಹೊಸ ಹೊಸ ಪ್ರೋಗ್ರಾಂಗಳನ್ನು ಕಲಿಯುವುದರಿಂದ ಕೃಷಿಯಲ್ಲಿ ಅವುಗಳನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರದೀಪ್ ಹೆಚ್.ಕೆ ಮತ್ತು ಡಾ. ಸತ್ಯನಾರಾಯಣ ಕೆ.ಪಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಿಶ್ವವಿದ್ಯಾಲಯದ ಡೀನ್ ಆರ್.ಸಿ.ಜಗದೀಶ್ ವಹಿಸಿಕೊಂಡಿದ್ದರು.