ಭದ್ರಾವತಿ : ಖರೀದಿ ದರವನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕ ರೈತರಿಗೆ ಶಿಮುಲ್ ಶ್ರಾವಣಕ್ಕೆ ಗಿಫ್ಟ್ ನೀಡಿದೆ. ಆಗಸ್ಟ್ ೧೧ರಿಂದ ಶಾವಣ ಮಾಸದ ಕೊಡುಗೆಯಾಗಿ ಹಾಲು ಉತ್ಪಾದಕ ರೈತರಿಗೆ ಒಂದು ರೂಪಾಯಿ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಶಿಮೂಲ್‌ನ ನೂತನ ಅಧ್ಯಕ್ಷ ಶ್ರೀಪಾದ್ ಹೆಗಡೆ ತಿಳಿಸಿದ್ರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಹಕರ ಮೇಲೆ ಹೊರೆಯಾಗದಂತೆ ಉತ್ಪಾದಕರಿಗೆ ದರ ಹೆಚ್ಚಳವಾಗಿದೆ. ಈ ಹಿಂದೆ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಕೆಜಿಗೆ ೨೯.೦೨ ರೂಪಾಯಿ ನೀಡಾಲಾಗುತ್ತಿತ್ತು ಆಗಸ್ಟ್ ೧೧ರಿಂದ ಅದನ್ನು ೩೦.೦೬ ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಸಂಘದಿಂದ ಉತ್ಪಾದಕರಿಗೆ ನೀಡುತ್ತಿದ್ದ ೨೭.೧೬ ರೂಪಾಯಿಯನ್ನು ೨೮.೨೦ ರೂಪಾಯಿಗೆ ಹೆಚ್ಚಳ ಮಾಡಿಲಾಗಿದೆ ಎಂದು ಎಂದರು.