ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ಪ್ರತಿಭಟನೆ 

ಶಿವಮೊಗ್ಗ : ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಮ್ಮ ಅಧಿಕಾರವನ್ನ ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಾವರಚಟ್ನಳ್ಳಿಯಲ್ಲಿನ ೯ ಎಕರೆಯಲ್ಲಿ ವಾಸವಾಗಿದ್ದ ನಿರಾಶ್ರಿತರು ಹಾಗೂ ನಿವೇಶನರಹಿತರನ್ನ ಅಲ್ಲಿಂದ ಒಕ್ಕಲೆಬಿಸಿದ್ದಾರೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಸರ್ಕಾರಿ ನೌಕರರ ಭವನದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಈ ಸಮಸ್ಯೆ ಬಗೆಹರಿಯುವ ತನಕ ಇಲ್ಲಿಯೇ ಹಗಲು, ರಾತ್ರಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.