ಶಿವಮೊಗ್ಗ : ಡಿಸೆಂಬರ್ 26ರಂದು ಪ್ರಿಯದರ್ಶಿನಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಪ್ರಿಯದರ್ಶಿನಿ ಭವನದ ಲೋಕಾರ್ಪಣೆ ಸಮಾರಂಭ ಹಾಗೂ ಡಿಸೆಂಬರ್ ೩೧ರಂದು ಪ್ರಿಯದರ್ಶಿನಿ ಬಡಾವಣೆ ನಿವಾಸಿಗಳ ಮತ್ತು ನಿವೇಶನದಾರರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವ ಆಚರಣೆ ಕಾರ್ಯಕ್ರಮ ನಡೆಯಲಿದೆ.
ಈ ಕುರಿತಾಗಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಪ್ರಯದರ್ಶಿನಿ ಬಡಾವಣೆಯ ನಿವೇಶನದಾರ ಡಾ. ಎಸ್.ಜಿ. ಸಾಮಕ್, ಡಿಸೆಂಬರ್ ೨೬ರಂದು ನಡೆಯಲಿರುವ ಸಮುದಾಯ ಭವನದ ಉದ್ಘಾಟನೆಯನ್ನ ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸಿಕೊಡಲಿದ್ದಾರೆ. ನಮ್ಮ ಸಂಘವು ರಜತ ಮಹೋತ್ಸವವನ್ನ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ ೩೧ರಂದು ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಕೃಷ್ಣ ಸಂಧಾನ ನಾಟಕ ನಡೆಯಲಿದೆ. ನಮ್ಮ ಬಡಾವಣೆಗೆ ಹೊಂದಿಕೊಂಡಿರುವ ಒಂದು ಕೆರೆಯ ಅಭಿವೃದ್ಧಿಯಾಗಿದ್ದು, ಆ ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಿಯ ಉದ್ಘಾಟನೆಯನ್ನ ಸೂಡಾ ವತಿಯಿಂದ ಸದ್ಯದಲ್ಲಿಯೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.