ಶಿವಮೊಗ್ಗ : ಹೊಸ ಯುಗದ ಆರಂಭ ಯುಗಾದಿ ಹಬ್ಬವನ್ನು ಆಚರಿಸಲು ಜನರು ಸಿದ್ಧರಾಗುತ್ತಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಹೂವು, ಹಣ್ಣು, ಮಾವಿನಸೊಪ್ಪು, ಬೇವಿನ ಸೊಪ್ಪಿನ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ.
ಇಲ್ಲಿಯೂ ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟಿದ್ದು ಐದು ರೂಪಾಯಿಗೆ ಸಿಗ್ತಾಯಿದ್ದ ಸೊಪ್ಪಿಗೆ 30 ರೂಪಾಯಿಯಾಗಿದೆ. ಅದೇ ರೀತಿ ಹಣ್ಣು, ಹೂವುಗಳ ಬೆಲೆ ಕೂಡ ಏರಿಕೆಯಾಗಿದೆ. ಆದ್ರೆ ಏನ್ ಮಾಡೋದು ಹಬ್ಬ ಮಾಡಲೇ ಬೇಕಲ್ವ ಅಂತರೆ ಜನರು. ಹಾಗೇ ಇತ್ತೀಚೆಗೆ ನಡೆದ ಮಾರಿಕಾಂಬ ಜಾತ್ರೆ ಹಾಗೂ ಬೆಲೆ ಏರಿಕೆಯಿಂದಾಗಿ ವ್ಯಾಪಾರ ಫುಲ್ ಡಲ್ ಆಗಿದೆ ಅಂತಾರೆ ವ್ಯಾಪಾರಿಗಳು.