ಶಿವಮೊಗ್ಗ : ಭಾರತದ ಪ್ರಾಗೈತಿಹಾಸಿಕ ಇತಿಹಾಸದ ಕುರಿತು ವಿವಿಧ ಮಾಹಿತಿಗಳನ್ನೊಳಗೊಂಡ ಪ್ರೀಹಿಸ್ಟಾರಿಕ್ ಫೌಂಡೇಷನ್ಸ್ ಆಫ್ ಭಾರತ ಎಂಬ ಪುಸ್ತಕ ಬಿಡುಗಡೆಯಾಗಿದೆ. ದಿ ಮಿಥಿಕ್ ಸೊಸೈಟಿ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.
ಪ್ರೊ. ಅ.ಸುಂದರ್ ಹಾಗೂ ಪ್ರೊ. ಎಸ್.ವಿ.ಪಾಡಿಗರ್ ಈ ಪುಸ್ತಕವನ್ನ ಸಂಪಾದಿಸಿದ್ದಾರೆ. ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತಾಗಿ ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಪ್ರಾಸ್ತವಿಕ ನುಡುಗಳನ್ನಾಡಿದರು. ಕುವೆಂಪು ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಸರ್ವಮಂಗಳ ಕಾರ್ಯದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗುಜರಾತ್ ವಿವಿಯ ಮಾಜಿ ಉಪಕುಲಪತಿ ಪ್ರೊ. ಎಸ್.ಎ.ಬಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.