ಸಾಗರ : ಉರುಳುಗಲ್ಲು ಗ್ರಾಮದಲ್ಲಿ ರಸ್ತೆ ಬದಿಯಲ್ಲಿದ್ದ ಮರ ಕಡಿದಿದ್ದಕ್ಕೆ ರೈತರ ಕೈಗೆ ಸ್ಲೇಟ್ ಹಿಡಿಸಿ ಅಮಾನವೀಯವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಂಡಿದ್ರು.
ಇದೀಗ ಈ ಸಂಬಂಧ ಶಿಸ್ತುಬದ್ಧ ತನಿಖೆಗಾಗಿ ಕಾರ್ಗಲ್ ವನ್ಯ ಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಎಸ್ ಕುಂಬಾರ್‌ರನ್ನು ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಅಂದ್ಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಕೆಡಿಪಿ ಮೀಟಿಂಗ್‌ನಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಫುಲ್ ಗರಂ ಆಗಿದ್ದರು. ಹೀಗಾಗಿ ಉಸ್ತುವಾರಿ ಸಚಿವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಈ ಸಂಬಂಧ ತನಿಖೆ ನಡೆಸುವಂತೆ ಸೂಚಿಸಿದ್ರು.