ಶಿವಮೊಗ್ಗ : ಸ್ಮಾರ್ಟ್‌ಸಿಟಿ ಕಾಮಗಾರಿ ವಿರುದ್ಧ ನಾಗರೀಕ ಹಿತರಕ್ಷಣಾ ವೇದಿಕೆ ಸರಣಿ ಪ್ರತಿಭಟನೆಗೆ ಮುಂದಾಗಿದೆ. ಈ ಹಿನ್ನೆಲೆ ನೂರು ಅಡಿ ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ರು. ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಡೆಯುತ್ತಿದೆ.
ಹಾಗೇನೆ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ. ಎಲ್ಲಾ ಇಲಾಖೆಯಗಳ ಕಾಮಗಾರಿಗಳು ಸಮನ್ವಯದಿಂದ ಆಗಬೇಕು. ಅದನ್ನು ಬಿಟ್ಟು ಒಬ್ಬರು ಮುಚ್ಚಿ ಹೋಗಿದ್ದನ್ನ ಮತ್ತೊಬ್ಬರು ಕಿತ್ತುಹಾಕುವಂತ ಕೆಲಸವಾಗ್ತಾಯಿದೆ.
ಶಿವಮೊಗ್ಗ ನಗರ ಸ್ಮಾರ್ಟ್‌ಸಿಟಿ ಕಾಮಗಾರಿ ಯೋಜನೆಗೆ ಆಯ್ಕೆಯಾದಾಗ ನಗರದ ಜನರು ಖುಷಿ ಪಟ್ಟಿದ್ದರು. ಆದ್ರೆ ಈಗ ಈ ಸ್ಮಾರ್ಟ್‌ಸಿಟಿ ಕಾಮಗಾರಿಯೇ ಕೆಲವು ಕಡೆ ಜನರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.