ಪಾಲಿಕೆ ಬಜೆಟ್ ಪೂರ್ವಭಾವಿ ಸಭೆ 

ಶಿವಮೊಗ್ಗ : ಮಹಾನಗರ ಪಾಲಿಕೆಯಲ್ಲಿ ೨೦೨೨ -೨೩ ನೇ ಸಾಲಿನ ಆಯವ್ಯಯ ತಯಾರಿಕೆ ಪೂರ್ವಭಾವಿಯಾಗಿ ಸಾರ್ವಜನಿಕರ ಸಲಹೆ ಸೂಚನೆ ಪಡೆಯಲು ಸಭೆ ನಡೆಯಿತು. ಮೇಯರ್ ಸುನಿತಾ ಅಣ್ಣಪ್ಪ ಸಭೆಯ ಅಧ್ಯಕ್ಷತೆ ವಹಿಸಕೊಂಡಿದ್ದರು.

ಬಹುತೇಕ ನಾಗರಿಕರು ಅವೈಜ್ಞಾನಿಕ ೨೪ ಗಂಟೆ ನೀರಿನ ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಧಾರವಾಡ, ಹುಬ್ಬಳ್ಳಿ ಇನ್ನಿತರ ಮಹಾನಗರಗಳಿಗೆ ನೀರಿನ ಕಂದಾಯಕ್ಕೆ ಹೋಲಿಸಿದರೆ ಶಿವಮೊಗ್ಗದಲ್ಲಿ ಈಗ ನೀಡಿರುವ ಬಿಲ್ ಹತ್ತು ಪಟ್ಟು ಜಾಸ್ತಿ ಇದೆ. ಮನಸ್ಸಿಗೆ ಬಂದ ಹಾಗೆ ನೀರಿನ ಕಂದಾಯ ವಿಧಿಸಲಾಗುತ್ತಿದ್ದು,ಸಂಪೂರ್ಣ ಅವೈಜ್ಞಾನಿಕವಾಗಿದೆ.

ಮೊದಲು ಇದನ್ನು ಸರಿಪಡಿಸಬೇಕು. ಅಲ್ಲಿವರೆಗೆ ಹಳೆಯ ಕಂದಾಯವನ್ನೇ ಸಂಗ್ರಹಿಸಬೇಕು ಹಾಗೂ ನೀರಿನ ಕಂದಾಯದ ಬಗ್ಗೆ ಹುಬ್ಬಳ್ಳಿ, ಧಾರವಾಡ ಮಾದರಿಯಲ್ಲಿ ತೆರಿಗೆ ವಿಧಿಸುವಂತೆ ಅವರು ಕೆಲವರು ಒತ್ತಾಯಿಸಿದರು. ಸ್ವಚ್ಚತೆ ಹಾಗೂ ಇನ್ನಿತರ ವಿಷಯಗಳ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಸಾಗಿದೆ.