ಹೈಲೆಟ್ಸ್:
ಪಿಎಫ್‌ಐ ಕಾರ್ಯಕರ್ತರ ಮನೆ ಮೇಲೆ ದಾಳಿ
ಶಿವಮೊಗ್ಗ ಪೊಲೀಸರಿಂದ ಕಾರ್ಯಾಚರಣೆ
ಭದ್ರಾವತಿಯಲ್ಲೂ ದಾಳಿ ನಡೆಸಿ ಐವರ ಬಂಧನ
ಶಾಂತಿ ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ
ಮುಂಜಾಗ್ರತಾ ಕ್ರಮವಾಗಿ ಪೊಲೀಸರ ದಾಳಿ
ಶಿವಮೊಗ್ಗ: ಪಿಎಫ್‌ಐ ಕಾರ್ಯಕರ್ತರ ಮನೆಯ ಮೇಲೆ ದಾಳಿ ಮುಂದುವರಿದಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪೊಲೀಸು ಕಾರ್ಯಾಚರಣೆ ನಡೆಸಿ ಬರೋಬ್ಬರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ದಾಳಿಯನ್ನು ನಡೆಸಲಾಗಿದೆ. ವಶಕ್ಕೆ ಪಡೆದಿರುವ ಆರೋಪಿಗಳನ್ನು ತಹಶೀಲ್ದಾರ್ ಮುಂದೆ ಹಾಜರು ಮಾಡಿಸಲಾಗಿದೆ. ಶಂಕಿತರ ಮನೆಯ ಮೇಲೂ ಪೊಲೀಸರು ದಾಳಿ ನಡೆಸಲಾಗಿದೆ.