ಸೂಳೆಬೈಲಿನ ಕಸಾಯಿಖಾನೆಯ ಮೇಲೆ ಪೊಲೀಸ್ ದಾಳಿ

ಹೈಲೆಟ್ಸ್:

ಸೂಳೆಬೈಲಿನ ಕಸಾಯಿಖಾನೆಯ ಮೇಲೆ ಪೊಲೀಸ್ ದಾಳಿ

೭ ಹಸುಗಳ ಹತ್ಯೆ, ಆರೋಪಿ ಅಜೀಜ್ ಪರಾರಿ

ಎಸ್ಪಿ ಮಿಥುನ್ ಕುಮಾರ್ ಮಾಹಿತಿ

ಶಿವಮೊಗ್ಗ:

ಸೂಳೆಬೈಲಿನ ಕಸಾಯಿ ಖಾನೆಯೊಂದರ ಮೇಲೆ ತುಂಗಾನಗರ ಪೊಲೀಸರು ದಾಳಿ ನಡೆಸಿ ೮ ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ, ೭ ಗೋವುಗಳ ಕತ್ತು ಸೀಳಿ ಹತ್ಯೆ ಮಾಡಲಾಗಿದ್ದು, ಉಳಿದ ಹಸುಗಳನ್ನು ರಕ್ಷಿಸಿದ್ದಾರೆ. ತುಂಗಾನಗರ ಪೊಲೀಸರು ದಾಳಿ ನಡೆಸಿದ್ದು, ಗೋವುಗಳ ಕಾಲುಗಳನ್ನ ಕಟ್ಟಿ ಕುತ್ತಿಗೆಯನ್ನ ಸೀಳಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಸೂಳೆಬೈಲಿನ ಅಜೀಜ್ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ೭ ಹಸುಗಳನ್ನ ಧಾರುಣವಾಗಿ ಹತ್ಯೆ ಮಾಡಲಾಗಿದ್ದು, ಈ ವೇಳೆ ಅಜೀಜ್ ಪರಾರಿಯಾಗಿದ್ದಾನೆ. ಎಲ್ಲಾ ಹಸುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.