ಹೈಲೆಟ್ಸ್:
ಸಾಗರದಲ್ಲಿ ಪೊಲೀಸರ ಕಾರ್ಯಚರಣೆ
ವೇಗವಾಗಿ ವಾಹನ ಚಲಾಯಿಸುವರ ಮೇಲೆ ನಿಗಾ
ಪೊಲೀಸರಿಂದ ದಾಖಲೆಗಳ ಪರಿಶೀಲನೆ ಕಾರ್ಯ
ಸಾಗರ:
ಮೂವರು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು, ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆಯ ಬಳಿಕ ಸಾಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ದಿನ ಮುಂಜಾನೆಯಿಂದಲೇ ಸಾಗರ ಪಟ್ಟಣದ ಹಲವು ಕಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಓಡಾಡುವ ಭಾರಿ ವಾಹನಗಳ ಮೇಲೆ ನಿಗಾ ಇಟ್ಟಿದ್ದಾರೆ. ಲಾರಿ ಚಾಲಕನ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದು, ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.