ಶಿವಮೊಗ್ಗ : ಜಿಲ್ಲೆಯಲ್ಲಿ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನ ಹತೋಟಿಯಲ್ಲಿಡಲು ಅಸಹಾಯಕ ಪೊಲೀಸರು ವಿಫಲವಾಗಿದ್ದಾರೆ. ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಏನೂ ಮಾಡ್ತಾ ಇಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಆಶೋಕ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯ್ತು.
ಈ ವೇಳೆ ಮಾತನಾಡಿದ ಹೆಚ್.ಎಸ್. ಸುಂದರೇಶ್, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಓಸಿ, ಇಸ್ಪೀಟ್ ದಂಧೆಗಳ ಕುರಿತಾಗಿ ನಾವು ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆಂಧ್ರಪ್ರದೇಶದಿಂದ ಗಾಂಜಾ ನೇರವಾಗಿ ಹೇಗೆ ಶಿವಮೊಗ್ಗಕ್ಕೆ ಬರುತ್ತೆ, ಯಾವ ಇಲಾಖೆಯ ವಿರುದ್ಧ ಸಂಘರ್ಷ ಮಾಡಲಿಕ್ಕಾಗಲಿ ಅಥವಾ ಯಾವ ರಾಜಕಾರಣಿಯ ವಿರುದ್ದ ದ್ವೇಶ ರಾಜಕಾರಣ ಮಾಡಲು ನಾವು ಈ ಪ್ರತಿಭಟನೆ ಮಾಡ್ತಾಯಿಲ್ಲ. ಈ ಕುರಿತಾಗಿ ನೂರಾರು ಸಾರ್ವಜನಿಕರ ದೂರು ಬಂದಿದ್ದರಿಂದ ಪ್ರತಿಭಟನೆ ಮಾಡ್ತಾಯಿದೇವೆ ಎಂದು ಹೇಳಿದರು.