ಫೋಟೋ ಜರ್ನಲಿಸಮ್ ಒಂದು ಸವಾಲಿನ ಕೆಲಸ : ಶಿವಮೊಗ್ಗ ನಂದನ್

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಕುರಿತಾಗಿ ಐಡಿಪಿ ಯೋಜನೆ ಅಂಗವಾಗಿ ಕಮ್ಯುನಿಕೇಷನ್ ಅಂಡ್ ಮೀಡಿಯಾ ಸ್ಕಿಲ್ ಕಾರ್ಯಗಾರ ನಡೆಯುತ್ತಿದೆ.

ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಕುರಿತಾಗಿ ಎಲ್ಲಾ ಮಾಹಿತಿ ಹಾಗೂ ಕೌಶಲ್ಯಗಳನ್ನ ಕಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮದಲ್ಲಿ ಬಹು ಮುಖ್ಯವಾದ ಕ್ಯಾಮೆರಾ ಹ್ಯಾಂಡಲಿಂಗ್ ಕುರಿತಾಗಿ ಹಾಗೂ ಕ್ಯಾಮೆರಾದಲ್ಲಿನ ವಿಧಗಳ ಕುರಿತು ಹಿರಿಯ ಫೋಟೋ ಜರ್ನಲಿಸ್ಟ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಶಿವಮೊಗ್ಗ ನಂದನ್ ಅವರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಫೋಟೋ ಜರ್ನಲಿಸಮ್ ಒಂದು ಸವಾಲಿನ ಕೆಲಸವಾಗಿದ್ದು ಪ್ರತಿ ಕ್ಷಣವೂ ಎಚ್ಚರದಿಂದ ಇರಬೇಕಾಗುತ್ತದೆ ಎಂದರು.