ಸಾಗರ ಪ್ರೆಸ್‌ಟ್ರಸ್ಟ್‌ನಿಂದ ನಗರ ಸಭೆ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ

ಸಾಗರ : ನಗರ ಸಭೆ ವತಿಯಿಂದ ಪತ್ರಿಕಾ ವಿತರಕರಿಗೆ ಉಚಿತವಾಗಿ ಸೈಕಲ್ ನೀಡಬೇಕು ಹಾಗೂ ನಗರಸಭೆ ವಸತಿ ಯೋಜನೆಯಡಿ ಅವರಿಗೆ ನಿವೇಶನ ಕಲ್ಪಿಸಿಕೊಡುವಂತೆ ಸಾಗರ ಪ್ರೆಸ್‌ಟ್ರಸ್ಟ್‌ನಿಂದ ನಗರ ಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ರು.

ಸಾಗರ ನಗರ ಸಭೆ ವ್ಯಾಪ್ತಿಯಲ್ಲಿ ಸುಮಾರು 50 ಜನ ಪತ್ರಿಕಾ ವಿತರಕರಿಗೆ ಸೈಕಲ್ ನೀಡಬೇಕು. ಇದರಿಂದ ಅವರಿಗೆ ಅನುಕೂಲವಾಗಲಿದೆ. ಜೊತೆಗೆ ಸೈಕಲ್ ಬಳಕೆಯಿಂದಾಗಿ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಲಿದೆ. ಹಾಗೇನೆ ಅವರಿಗೆ ನಿವೇಶನ ಕಲ್ಪಿಸಿಕೊಡಬೇಕು, ಇದರಿಂದಾಗಿ ಅವರು ದಾಖಲೆಗಳನ್ನು ಹಿಡಿದುಕೊಂಡು ನಿವೇಶನಕ್ಕೆ ಅಡ್ಡಾಡುವುದು ತಪ್ಪಲಿದೆ ಎಂದು ಮನವಿ ಪತ್ರ ಸಲ್ಲಿಸಿದ್ರು.