ಓಮಿಕ್ರಾನ್ ಕುರಿತು ಜನ ಜಾಗೃತಿ ಅಭಿಯಾನ

ಶಿವಮೊಗ್ಗ : ಆಮ್‌ಆದ್ಮಿ ಪಕ್ಷದ ವತಿಯಿಂದ ಓಮಿಕ್ರಾಮ್ ಕುರಿತಾಗಿ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಆಮ್‌ಆದ್ಮಿ ಜಿಲ್ಲಾಧ್ಯಕ್ಷ ಮನೋಹರ್ ಗೌಡ ಹೇಳಿದರು. ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕರೋನದಿಂದಾಗಿ ಲಕ್ಷಾಂತರ ಜನರು ಪ್ರಾಣ ಹಾಗೂ ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷವು ಓಮಿಕ್ರಾನ್ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ನಡೆಸಲಿದೆ. ಹೀಗಾಗಿ ಜನವರಿ ೨ರಂದು ಶಿವಮೊಗ್ಗದ ಎಪಿಎಂಸಿ ತರಕಾರಿ  ಮಾರುಕಟ್ಟೆಯ ಬಳಿ ಬೆಳಗ್ಗೆ ೭.೩೦ಕ್ಕೆ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಓಮಿಕ್ರಾನ್ ಕುರಿತಾಗಿ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.