ಶಿವಮೊಗ್ಗದಲ್ಲಿ ಮೇ 5ಕ್ಕೆ ಪರ್ವ ನಾಟಕ ಪ್ರದರ್ಶನ 

ಶಿವಮೊಗ್ಗ : ಕನ್ನಡದ ಹೆಸರಾಂತ ಕಾದಂಬರಿಗಾರರಲ್ಲಿ ಎಸ್.ಎಸ್.ಭೈರಪ್ಪ ಕೂಡ ಒಬ್ಬರು. ಅವರ ಜನಪ್ರೀಯ ಕೃತಿಗಳಲ್ಲಿ ಒಂದಾದ ಪರ್ವ ಕಾದಂಬರಿಯ ರಂಗ ಪ್ರಯೋಗವನ್ನು ಮೈಸೂರು ರಂಗಾಯಣ ನಡೆಸಿದೆ. ಮೇ 5 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪರ್ವ ನಾಟಕ ಪ್ರದರ್ಶನಗೊಳ್ಳಲಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಪರ್ವ ನಾಟಕದ ಈಗಾಗಲೇ ೨೪ ಪ್ರದರ್ಶನಗಳು ಈಗಾಗಲೇ ಮುಗಿದಿದೆ. ರಾಜ್ಯದ್ಯಂತ ನಾಟಕ ಪ್ರದರ್ಶನ ಮಾಡಿದಾಗಲೂ ಒಂದೇ ರೀತಿಯ ಅಭಿಪ್ರಾಯ ಕೇಳಿ ಬರುತ್ತಿದೆ. ನಾಟಕದ ಬಗ್ಗೆ ಎಲ್ಲರೂ ಒಳ್ಳೆಯ ವಿರ್ಮಷೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷರು ಎಲ್ಲಯೂ ಕದಡದೆ ನಾಟಕವನ್ನು ನೋಡಿದ್ದಾರೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ಆಡಳಿತಾಧಿಕಾರಿ ಶೈಲಜಾ ಉಪಸ್ಥಿತರಿದ್ದರು.