ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಪೇಜಾವರ ಶ್ರೀ ಭೇಟಿ 

ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನೆಲ್ಲೆ ಅವರ ಮನೆಗೆ ಪ್ರತಿದಿನವು ಸ್ವಾಮೀಜಿಗಳು ಭೇಟಿ ನೀಡುತ್ತಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೂಡ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಅವರ ಮೇಲೆ ಗುರುತರವಾದ ಆರೋಪ ಬಂದಿದೆ. ಆದಷ್ಟು ಬೇಗ ಈಶ್ವರಪ್ಪ ಈ ಅಗ್ನಿ ಪರೀಕ್ಷೆಯಿಂದ ಗೆದ್ದು ಹೊರ ಬರುತ್ತಾರೆ. ಅವರ ಮೇಲೆ ಶ್ರೀರಾಮನ ಶ್ರೀರಕ್ಷೆ ಸದಾಯಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಈ ವೇಳೆ ಮಾತನಾಡಿದ ಈಶ್ವರಪ್ಪ ಗುರುಗಳು ನೀಡಿರುವ ಆದಷ್ಟು ಬೇಗ ಫಲ ಕೊಡುತ್ತದೆ. ಈ ಮೂಲಕ ನನ್ನ ಮೇಲೆ ಬಂದಿರುವ ಆರೋಪಗಳಿಂದ ನಾನು ಹೊರಬರುವ ವಿಶ್ವಾಸವಿದೆ ಎಂದರು.