ಹೊಳೆಬಾಗಿಲು : ಇಲ್ಲಿನ ಸೇತುವೆಗೆ ಮಣ್ಣು ಬ್ಯಾಂಕ್ ನಿರ್ಮಿಸಲು ಸಿಗಂದೂರು ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಮಣ್ಣು ತೆಗೆಯಲು ಮುಂದಾದ ಖಾಸಗಿ ಕಂಪನಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಯಂತ್ರಗಳನ್ನು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಮಣ್ಣು ತೆಗೆದಿರುವ ಭೂ ಭಾಗವು ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 71ಮತ್ತು ಸರ್ವೆ ನಂಬರ್ 72ಕ್ಕೆ ಸೇರಿದ್ದು, ಈ ಭೂಮಿ ಎಂದು ಈಗಾಗಲೇ ವನ್ಯಜೀವಿ ವಲಯದಿಂದ ಘೋಷಣೆ ಆಗಿದೆ. ಅಲ್ಲದೇ ೨೦೦೯ರ ಹೊತ್ತಿಗೆ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆಯಿಂದ ದೇವರ ಕಾಡು ಎಂದು ಘೋಷಣೆ ಆಗಿದೆ. ಆದರೂ ಕೂಡ ಭೂಮಿಯನ್ನ ಖಾಸಗಿ ವ್ಯಕ್ತಿಗಳಿಗೆ ಬಗರ್‌ಹುಕುಂ ಅಡಿಯಲ್ಲಿ ಮಂಜೂರಾತಿ ಆಗಿರುವ ಬಗ್ಗೆ ಪಹಣಿಯಲ್ಲಿ ನಮುದಾಗಿದೆ. ಹಾಗಾಗಿ ಕಾಡನ್ನು ಖಾಸಗಿಯವರಿಗೆ ನೀಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.