ಕುಲಪತಿಗಳ ವಿಳಂಬ ನೀತಿಗೆ ಆಕ್ರೋಶ 

ಶಿವಮೊಗ್ಗ : ಕುವೆಂಪು ವಿವಿಯಲ್ಲಿ ಡೀನ್ ಹುದ್ದೆಗೆ ಡಾ.ಜಗನ್ನಾಥ್ ಕೆ.ಡಾಂಗೆ ಜೇಷ್ಠತೆ ಆಧಾರದ ಮೇಲೆ ಆರ್ಹರಿದ್ದು ಈ ಹುದ್ದೆಗೆ ಅರ್ಜಿಯನ್ನ ಕೂಡ ಸಲ್ಲಿಸಿದ್ದಾರೆ. ಆದ್ರೆ ವಿವಿಯ ಕುಲಪತಿಗಳು ಈ ವಿಚಾರವಾಗಿ ವಿಳಂಬ ನೀತಿಯನ್ನ ಅನುಸರಿಸುತ್ತಿದ್ದಾರೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಭಾಕರ್.ಪಿ., ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಜಗನ್ನಾಥ್ ಕೆ.ಡಾಂಗೆ ಡೀನ್ ಹುದ್ದೆಗೆ ಅರ್ಹರಿದ್ದು ಈ ವಿಚಾರವಾಗಿ ಸಿಂಡಿಕೇಟ್ ಸದಸ್ಯರು ಒಪ್ಪಿದ್ದಾರೆ. ಆದರೂ ಕೂಡ ಕುಲಪತಿ ಡಾ.ವೀರಭದ್ರಪ್ಪ ಅವರು 4 ತಿಂಗಳು ಕಳೆದರೂ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಡಾ.ಜಗನ್ನಾಥ್ ಕೆ.ಡಾಂಗೆ ಪರವಾಗಿ ಆದೇಶ ಹೊರಡಿಸಿದೇ ಇದ್ದರೆ, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.