ಮದ್ಯದಂಗಡಿ ತೆರೆಯಲು ವಿರೋಧ 

ಶಿವಮೊಗ್ಗ : ಜನವಸತಿಯಿರುವ ಗೋಪಾಲಗೌಡ ಬಡಾವಣೆಯಲ್ಲಿ ಜನರ ಆಕ್ಷೇಪದ ನಡುವೆಯೇ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಿರುವ ವಲಯ ಎರಡರ ಅಬಕಾರಿ ನಿರೀಕ್ಷರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.

ಗೋಪಾಲಗೌಡ ಬಡಾವಣೆಯಲ್ಲಿ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಈ ಮೊದಲು ಕೂಡ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲಿದೆ ಈ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡ ಭೇಟಿ ಮಾಡಿ ಮನವಿ ನೀಡಲಾಗಿತ್ತು. ಅವರು ಅಬಕಾರಿ ಉಪ ಆಯುಕ್ತರಿಗೆ ಕರೆ ಮಾಡಿ ಈ ಭಾಗದಲ್ಲಿ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇಲ್ಲಿ ಮದ್ಯದಂಗಡಿ ತೆರೆಯಲು ನಮ್ಮ ಆಕ್ಷೇಪವಿಲ್ಲವೆಂದು ಗೋಪಾಲಗೌಡ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆ ಜನರೆಂದು ಹೇಳಿ 110ಮಂದಿಯ ನಕಲಿ ಸಹಿ ಸೃಷ್ಟಿಸಿ, ವಲಯ ಎರಡರ ಅಬಕಾರಿ ನಿರೀಕ್ಷರು ಇಲ್ಲಿ ಪರವಾನಗಿ ನೀಡಬಹುದೆಂದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದ್ದರಿಂದ ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.