ಕಂದಾಯ ಗ್ರಾಮಗಳನ್ನ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸದಂತೆ ಆಗ್ರಹ 

ಶಿವಮೊಗ್ಗ : ಕಬಟೂರು, ಸಮುನಹಳ್ಳಿ ಸೇರಿದಂತೆ ಇನ್ನೂ ಹಲವು ಕಂದಾಯ ಗ್ರಾಮಗಳನ್ನ ಆನವಟ್ಟಿ ಪಟ್ಟಣ ಪಂಚಾಯತ್‌ಗೆ ಸೇರಿಸಿರುದನ್ನ ಖಂಡಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಯನ್ನ ಪಟ್ಟಣ ಪಂಚಾಯಿತಿ ದರ್ಜೆಗೆ ಏರಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ಪತ್ರಕ್ಕೆ ನಾವು ಅಕ್ಷೇಪಣಾ ಅರ್ಜಿಯನ್ನ ಸಲ್ಲಿಸಿದ್ದೇವೆ. ಆದರೆ ಸರ್ಕಾರವು ನಮ್ಮ ಆಕ್ಷೇಪಣೆಗೆ ಯಾವುದೇ ಮಾನ್ಯತೆ ನೀಡದೆ ಆನವಟ್ಟಿ ಗ್ರಾಮ ಪಂಚಾಯಿತಿಯನ್ನ ಪಟ್ಟಣ ಪಂಚಾಯಿತಿ ದರ್ಜೆಗೆ ಏರಿಸಿದೆ. ಈ ಸಂಬಂಧ ನಾವು ಹೈಕೋರ್ಟ್‌ನಲ್ಲಿ ಪ್ರಕರಣವನ್ನ ಹೂಡಿದ್ದೇವೆ. ಆದರೆ ಈ ವಿಚಾರ ಇನ್ನೂ ನ್ಯಾಯಾಲಯದ ಹಂತದಲ್ಲಿರುವಾಗಲೇ ವಾರ್ಡ್ ರಚನೆ ಅಥವಾ ಮರುವಿಂಗಡಣೆ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.